ಧರ್ಮ ಕೀರ್ತಿರಾಜ್ ಅವರಿಂದ ಅನಾವರಣವಾಯಿತು ಲೇಡಿಸ್ ಬಾರ್ ಟ್ರೈಲರ್
Posted date: 31 Wed, Jan 2024 10:03:23 AM
ಡಿ.ಎಂ.ಸಿ. ಪ್ರೊಡಕ್ಷನ್ಸ್ ಮೂಲಕ  ಟಿ.ಎಂ.ಸೋಮರಾಜು ಅವರು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್. ಕಥೆ, ಚಿತ್ರಕಥೆ ಬರೆದು  ಆಕ್ಷನ್ ಕಟ್ ಹೇಳಿರುವ "ಲೇಡಿಸ್‌ಬಾರ್"  ಚಿತ್ರದ ಟ್ರೈಲರನ್ನು ಫಿಲಂ ಚೇಂಬರ್ ಅಧ್ಯಕ್ಷ ಎನ್‌.ಎಂ. ಸುರೇಶ್ ಹಾಗೂ ನಟ ಧರ್ಮ ಕೀರ್ತಿರಾಜ್ ಅವರು  ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಧರ್ಮ ಕೀರ್ತಿರಾಜ್ ಟ್ರೈಲರ್ ಪ್ರಾಮಿಸಿಂಗ್ ಅಗಿದೆ. ನಿರ್ದೇಶಕ ಮುತ್ತು ನಮ್ಮ ರೋನಿ ಸಿನಿಮಾಗೆ  ಅಸೋಸಿಯೇಟ್ ಆಗಿದ್ದರು, ಈಗ ಸಮಾಜಕ್ಕೆ ಸಂದೇಶ ಕೊಡುವ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ ಎಂದರು. 

ನಿರ್ದೇಶಕ ಮುತ್ತು  ಮಾತನಾಡಿ  ಚಿತ್ರದಲ್ಲಿ ಅದ್ಭುತವಾದ ಕಥೆಯಿದೆ, ಅದೇ ನಮ್ಮ ಸಿನಿಮಾಗೆ ಹೀರೋ. ಈಗಾಗಲೇ ಟೀಸರ್ ಒಂದು ಲಕ್ಷ ವೀಕ್ಷಣೆಯಾಗಿದ್ದು, ಇಡೀ ಚಿತ್ರ ಪ್ರತಿಕ್ಷಣ ಎಂಟರ್‌ಟೈನಿಂಗ್ ಆಗಿ ಬಂದಿದೆ. ಹೆಣ್ಣುಮಕ್ಕಳು ಬಾರ್‌ಗೆ ಹೋದರೆ ಏನೇನಾಗುತ್ತದೆ ಎಂಬುದನ್ನು ಚಿತ್ರದ ಮೂಲಕ ತೋರಿಸಿದ್ದೇವೆ ಎಂದರು.  

ನಂತರ ಎನ್.ಎಂ.ಸುರೇಶ್ ಮಾತನಾಡುತ್ತ  ಹೊಸಬರು ಸಿನಿಮಾ ಮಾಡಿದಾಗ ನಾವೆಲ್ಲ ಸಪೋರ್ಟ್ ಮಾಡಬೇಕು. ಈ ಟ್ರೈಲರ್ ನೋಡಿದಾಗ  ಏನೋ ವಿಶೇಷತೆಯಿದೆ ಎನ್ನುವುದು  ಕಾಣುತ್ತದೆ. ಡೈರೆಕ್ಟರ್‌ಗೆ ಕಾನ್ಫಿಡೆಂಟ್ ಇದೆ,  ಇನ್ನು ಹರೀಶ್‌ರಾಜ್, ನಿರ್ಮಾಪಕ ಸೋಮರಾಜ್, ಗಣೇಶ್‌ರಾವ್ ಎಲ್ಲರೂ  ಚೆನ್ನಾಗಿ ಆ್ಯಕ್ಟ್ ಮಾಡಿದ್ದಾರೆ,  ನಿಮ್ಮ ಕೆಲಸದಲ್ಲಿ ಶ್ರದ್ದೆ ಪ್ರಾಮಾಣಿಕತೆ ಇದ್ದರೆ ಖಂಡಿತ ಗೆಲುವು ಸಿಗುತ್ತದೆ ಎಂದು ಹೇಳಿದರು.  

ನಂತರ ನಿರ್ಮಾಪಕ ಸೋಮರಾಜ್ ಮಾತನಾಡಿ  ನಮ್ಮ ಚಿತ್ರದ ಕಂಟೆಂಟ್ ತುಂಬಾ ವಿಭಿನ್ನವಾಗಿದೆ, ಬಾರ್ ಕಲ್ಚರ್ ಇದೆ, ನಮ್ಮ ಸಮಾಜದಲ್ಲಿ ಯಾವ ವ್ಯವಸ್ಥೆ ಇದೆ ಅನ್ನೋದನ್ನು ತೋರಿಸಿ ಸಂದೇಶ ಹೇಳಿದರೆ, ಜನರಿಗದು ಸುಲಭವಾಗಿ ಅರ್ಥವಾಗುತ್ತದೆ ಎಂದರು. ನಟ ಗಣೇಶ್‌ರಾವ್ ಕೇಸರಕರ್ ಮಾತನಾಡಿ ಬಾರ್‌ನಿಂದಾಗುವ  ಅನುಕೂಲ, ಅನಾನುಕೂಲ ಏನೆಂದು ಇಲ್ಲಿ ತೋರಿಸಿದ್ದಾರೆ, ನಾನು ಪೊಲೀಸ್ ಆಗಿ ಕಾಣಿಸಿಕೊಂಡಿದ್ದು,  ಪೊಲೀಸರಿಂದ ಹೇಗೆ ಬಾರ್‌ಗಳ ಶೋಷಣೆಯಾಗುತ್ತದೆ ಎಂದು  ಚಿತ್ರದಲ್ಲಿ ತೋರಿಸಿದ್ದಾರೆ ಎಂದರು. ನಟ ಹರೀಶ್‌ರಾಜ್ ಮಾತನಾಡಿ ಇದರಲ್ಲಿ  ನಾನು ಶಿಳ್ಳೆ ಎಂಬ ಪಾತ್ರ ಮಾಡಿದ್ದೇನೆ ಎಂದರು. ನಟಿ ಮೀನಾಕ್ಷಿ ಮಾತನಾಡಿ ನಾನು ಸುಮಾರು ೧೬೦ ಚಿತ್ರಗಳಲ್ಲಿ  ತಾಯಿಯ ಪಾತ್ರ ಮಾಡಿದ್ದೇನೆ.  ಈ ಚಿತ್ರದಲ್ಲೂ  ತಾಯಿಯ ಪಾತ್ರವನ್ನೇ ಮಾಡಿದ್ದರೂ ಅದರಲ್ಲಿ ವಿಶೇಷತೆಯಿದೆ, ಅದೇನೆಂದು ಚಿತ್ರದಲ್ಲಿ ಗೊತ್ತಾಗುತ್ತದೆ ಎಂದರು.     

ಲೇಡಿಸ್‌ಬಾರ್ ಚಿತ್ರದಲ್ಲಿ  ಬರೀ ಕುಡಿತವನ್ನಷ್ಟೇ ತೋರಿಸಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನವಿದೆ. ಸದ್ಯ ನಮ್ಮಲ್ಲಿ ಮಹಿಳೆಯರಿಗೆ ಅಂತ ಪ್ರತ್ಯೇಕ ಬಾರ್‌ಗಳಿಲ್ಲ, ವಿದೇಶಗಳಲ್ಲಿದೆ, ಆರೀತಿ ನಮ್ಮಲ್ಲೂ ಬಂದರೆ ಯಾವರೀತಿ ಆಗಬಹುದು ಎಂದು  ಚಿತ್ರದಲ್ಲಿ ಹೇಳಲಾಗಿದೆ. ನಿರ್ಮಾಪಕ ಟಿ.ಎಂ.ಸೋಮರಾಜು ಅವರು ಸುಧಾಕರ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹರೀಶ್‌ರಾಜ್, ಶಿವಾನಿ, ಮೀನಾಕ್ಷಿ, ಮಾಧುರಿ, ಗಣೇಶ್‌ರಾವ್, ಆರಾಧ್ಯ, ಪ್ರೇರಣಾ, ಚೈತ್ರ ಮುಂತಾದವರು  ಲೇಡೀಸ್ ಬಾರ್ ಚಿತ್ರದ ಪ್ರಮುಖ  ತಾರಾಬಳಗದಲ್ಲಿದ್ದಾರೆ.  ಹರ್ಷ ಕಾಗೋಡ್ ಅವರ ಸಂಗೀತ ನಿರ್ದೇಶನ,  ವೀನಸ್‌ಮೂರ್ತಿ  ಅವರ ಛಾಯಾಗ್ರಹಣ ಹಾಗೂ ಜಗ್ಗು ಮಾಸ್ಟರ್ ಅವರ  ನೃತ್ಯ ನಿರ್ದೇಶನ ಲೇಡಿಸ್ ಬಾರ್ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed